*Covid-19 ವೈರಸ್ ಸೊಂಕು ಹರಡುತ್ತಿರುವ ಈ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸಲು ನಮ್ಮ ಸಲಹೆ ಹಾಗೂ ಕಾರ್ಯತಂತ್ರಗಳು* ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಚರ್ಚೆಯಾಗುತ್ತಿರುವ ವಿಷಯ ಎಂದರೆ ಅದು ಕೋವಿಡ್-19 ಈ ಮಹಾಮಾರಿ ಯಾವುದೋ ಒಂದು ಮೂಲೆಯಲ್ಲಿ ಹುಟ್ಟಿ ಜಗತ್ತನ್ನೇ ಆವರಿಸಿ ಜಗತ್ತಿನ ಜನರನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದುಕೊಂಡಿದೆ. ಕಣ್ಣಿಗೆ ಕಾಣದ ವೈರಸ್ ಇಡೀ ಮಾನವ ಕುಲಕ್ಕೆ ಆತಂಕ ಉಂಟುಮಾಡಿದೆ ಈ ಒಂದು ರೋಗ ಇಡೀ ಜಗತ್ತಿಗೆ ಆರ್ಥಿಕ ನಷ್ಟ ಉಂಟು ಮಾಡಿದೆ.ಇತಿಹಾಸದಲ್ಲಿ ಈ ರೀತಿಯ ಯಾವದು ಆರ್ಥಿಕ ನಷ್ಟ/ಮಕ್ಕಳ ಶಿಕ್ಷಣದಲ್ಲಿ ಕುಂಠಿತಗೊಂಡಿರಲಿಲ್ಲ ಶಾಲೆಗಳು ಆರಂಭವಾದರು ಪೋಷಕರು ಮಕ್ಕಳಿಗೆ ಶಾಲೆಗಳಿಗೆ ಕಳಿಸಲು ಹಿಂದೇಟು ಹಾಕುತಿದ್ದಾರೆ. ನಮ್ಮ ಮಕ್ಕಳಿಗೆ ಶಿಕ್ಷಣ ಕುಂಠಿತ ಆಗಬಾರದು ಎಂದರೆ ಅವರಿಗೆ ಹಿರಿಯ ತರಗತಿ ಮಕ್ಕಳಿಗೆ online ಮೂಲಕ ಶಿಕ್ಷಣ ಕೊಡುವುದು ಸೂಕ್ತ. ಈ ಒಂದು Covid-19 ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಸ್ವತಃ ಕೆಲವು ಮಾರ್ಗಗಳು ಕಾಣಬಹುದು. 1) ಪೋಷಕರ ಜೊತೆಗೆ Communication ಮಾಡಿ ಕಲಿಕೆ ಬಗ್ಗೆ ಮಕ್ಕಳಿಗೆ ಸಲಹೆ ನೀಡಬಹುದು. 2) WhatsApp ಗ್ರುಪ್ ಮಾಡಿ ಮಕ್ಕಳಿಗೆ Homework ಕೊಡಬಹುದು. 3)ಕೆಲವು ಪಾಠಗಳಿಗೆ ಸಂಬಂಧಿಸಿದಂತೆ /ಕಲಿಕಾಂಶಗಳ ಸಣ್ಣ Audio ಮಾಡಿ ಮಕ್ಕಳ ಗ್ರುಪ್ ಹಾಕಬಹುದು. 4)ಪೋಷಕರ ಅಭಿಪ್ರಾಯ ಸಂಗ್ರಹಿಸಿ ಮಕ್ಕಳು ಇರುವಲ್ಲಿ ಶಾಲೆಯ ಹೊರಾಂಗ...
Very Nice Mam
ReplyDelete