ಚಟುವಟಿಕ-10 Covid-19 ವೈರಸ್ ಸೊಂಕು ಹರಡುತ್ತಿರುವ ಈ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸಲು ನಮ್ಮ ಸಲಹೆ ಹಾಗೂ ಕಾರ್ಯತಂತ್ರಗಳು*

*Covid-19 ವೈರಸ್ ಸೊಂಕು ಹರಡುತ್ತಿರುವ ಈ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸಲು ನಮ್ಮ ಸಲಹೆ ಹಾಗೂ ಕಾರ್ಯತಂತ್ರಗಳು*

ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಚರ್ಚೆಯಾಗುತ್ತಿರುವ ವಿಷಯ ಎಂದರೆ ಅದು ಕೋವಿಡ್-19 ಈ ಮಹಾಮಾರಿ ಯಾವುದೋ ಒಂದು ಮೂಲೆಯಲ್ಲಿ ಹುಟ್ಟಿ ಜಗತ್ತನ್ನೇ ಆವರಿಸಿ ಜಗತ್ತಿನ ಜನರನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದುಕೊಂಡಿದೆ. ಕಣ್ಣಿಗೆ ಕಾಣದ  ವೈರಸ್ ಇಡೀ ಮಾನವ ಕುಲಕ್ಕೆ ಆತಂಕ ಉಂಟುಮಾಡಿದೆ ಈ ಒಂದು ರೋಗ ಇಡೀ ಜಗತ್ತಿಗೆ ಆರ್ಥಿಕ ನಷ್ಟ ಉಂಟು ಮಾಡಿದೆ.ಇತಿಹಾಸದಲ್ಲಿ ಈ ರೀತಿಯ ಯಾವದು ಆರ್ಥಿಕ ನಷ್ಟ/ಮಕ್ಕಳ ಶಿಕ್ಷಣದಲ್ಲಿ ಕುಂಠಿತಗೊಂಡಿರಲಿಲ್ಲ ಶಾಲೆಗಳು ಆರಂಭವಾದರು ಪೋಷಕರು ಮಕ್ಕಳಿಗೆ ‌ಶಾಲೆಗಳಿಗೆ ಕಳಿಸಲು ಹಿಂದೇಟು ಹಾಕುತಿದ್ದಾರೆ.
ನಮ್ಮ ಮಕ್ಕಳಿಗೆ ಶಿಕ್ಷಣ ಕುಂಠಿತ ಆಗಬಾರದು ಎಂದರೆ ಅವರಿಗೆ ಹಿರಿಯ ತರಗತಿ ಮಕ್ಕಳಿಗೆ online ಮೂಲಕ ಶಿಕ್ಷಣ ಕೊಡುವುದು ಸೂಕ್ತ.
ಈ ಒಂದು Covid-19  ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಸ್ವತಃ ಕೆಲವು  ಮಾರ್ಗಗಳು ಕಾಣಬಹುದು.
1) ಪೋಷಕರ ಜೊತೆಗೆ Communication ಮಾಡಿ ಕಲಿಕೆ ಬಗ್ಗೆ ಮಕ್ಕಳಿಗೆ ಸಲಹೆ ನೀಡಬಹುದು.

2) WhatsApp ಗ್ರುಪ್ ಮಾಡಿ ಮಕ್ಕಳಿಗೆ Homework ಕೊಡಬಹುದು.

3)ಕೆಲವು ಪಾಠಗಳಿಗೆ ಸಂಬಂಧಿಸಿದಂತೆ /ಕಲಿಕಾಂಶಗಳ ಸಣ್ಣ Audio ಮಾಡಿ ಮಕ್ಕಳ ಗ್ರುಪ್ ಹಾಕಬಹುದು.

4)ಪೋಷಕರ ಅಭಿಪ್ರಾಯ ಸಂಗ್ರಹಿಸಿ  ಮಕ್ಕಳು ಇರುವಲ್ಲಿ ಶಾಲೆಯ ಹೊರಾಂಗಣ/ ವಠಾರ/ ಸಮುದಾಯದ ಕೇಂದ್ರ /ಸ್ವಲ್ಪ ಸ್ವಲ್ಪ  ಮಕ್ಕಳಿಗೆ ಪಾಳಿ ಪ್ರಕಾರ Social Distance ಮಾಡಿ  ಶಿಕ್ಷಣ ಕೊಡಬಹುದು.

5)ವಾರದಲ್ಲಿ Day by Day ಬಿಟ್ಟು ಒಂದೊಂದು ತರಗತಿ ಮಕ್ಕಳಿಗೆ ಶಾಲೆಗಳಿಗೆ ಕರಿಸಿ ಪಾಠಗಳನ್ನು ಮಾಡಬಹುದು

6) ಗ್ರಾಮದಲ್ಲಿ D.Ed/B.Ed ಮಾಡಿದ ಅಭ್ಯರ್ಥಿಗಳನ್ನು ಮಾರ್ಗದರ್ಶಿ ಶಿಕ್ಷಕರು ಎಂದು ತೆಗೆದುಕೊಂಡು ಅವರ ಊರಲ್ಲಿ ಮಕ್ಕಳು ಇರುವಲ್ಲಿ ಪಾಠ ಬೋಧನೆ ಮಾಡಬಹುದು.

7) ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಅವರ -ಅವರ ಗ್ರಾಮದಲ್ಲಿ 10-10 ಮಕ್ಕಳ ತಂಡ ಮಾಡಿ ಶಿಕ್ಷಣ ಕೊಡಬಹುದು.

8)ಶೈಕ್ಷಣಿಕವಾಗಿ ಇರುವ ಕೆಲವು ವಿಡಿಯೋಗಳನ್ನು ಮಕ್ಕಳಿಗೆ ನೋಡಲು ತಿಳಿಸುವುದು.
ಉದಾಹರಣೆ:DSERT/ DIKSHA/KHAN ACADEMY/DD CHANDAN/VIDYAGAM ಈ YouTube Channel ನೋಡಲು ತಿಳಿಸಬೇಕು.

Covid-19 ಸಂದಿಗ್ಧ ಪರಿಸ್ಥಿತಿಯಲ್ಲಿ  ಈ  ರೀತಿಯಲ್ಲಿ ನಾವು  unacademic ಆಗಿ ಮಕ್ಕಳ ಶೈಕ್ಷಣಿಕವಾಗಿ ಉತ್ಕೃಷ್ಟಗೊಳಿಸಲು ನನ್ನ ತಿಳಿದ ಮಟ್ಟಿಗೆ ಸಲಹೆಗಳನ್ನು ಕೊಟ್ಟಿದ್ದೆನೆ.

ಧನ್ಯವಾದಗಳು👏👏

*ಶ್ರೀ ಮತಿ ಪೂರ್ಣಿಮಾ ಸಜ್ಜನ ಸ.ಶಿ GHPS ದೇಸಣಗಿ ಜೇರಟಗಿ ಕ್ಲಸ್ಟರ್ ತಾ||ಜೇವರ್ಗಿ ಜಿ||ಕಲಬುರಗಿ*

Comments

Post a Comment

Popular posts from this blog

ಚಟುವಟಿಕ-10 Covid-19 ವೈರಸ್ ಸೊಂಕು ಹರಡುತ್ತಿರುವ ಈ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸಲು ನಮ್ಮ ಸಲಹೆ ಹಾಗೂ ಕಾರ್ಯತಂತ್ರಗಳು*